ವಿಮಲ್ ಜೈನ್ ಅರ್ಪಿಸುವ, ರಾಘವ ಲೋಕಿ ಮತ್ತು ಶ್ರೀಧರ್ ನಿರ್ಮಾಣದ ‘ಪ್ಲೇಯರ್ಸ್ ಚಿತ್ರವು ರೇಣುಕಾಂಬ ಸ್ಟುಡಿಯೋದಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಳಿಸಿದೆ. ಈ ಚಿತ್ರಕ್ಕೆ ನಿರ್ದೇಶಕ ರಾಘವಲೋಕಿಅವರ ಶಿಷ್ಯ ನವೀನ್ ಮತ್ತು ಗಣೇಶ್ ಜಂಟಿಯಾಗಿ ಸೇರಿ ಮೊದಲ ಬಾರಿಗೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಛಾಯಾಗ್ರಹಣ ಮೋಹನ್, ಸಂಗೀತ ಗುರುಕಿರಣ್, ಕಲೆ ನಾಗರಾಜ್, ನೃತ್ಯ ಕಲೈ, ಸಂಕಲನ ವೆಂಕಟೇಶ್, ಸಹ ನಿರ್ದೇಶನ ರಾಜು ವೈವಿಧ್ಯ, ನಿರ್ವಹಣೆ ಸೋಮು. ತಾರಾಗಣದಲ್ಲಿ ಕಿಶೋರ್, ರೋಹಿತ್ (ರಾಕ್ಸ್ಟಾರ್), ನಿರಂಜನ್ ದೇಶಪಾಂಡೆ, ಸ್ವರೂಪಿಣಿ, ಜಯಶೀಲ ಮುಂತಾದವರಿದ್ದಾರೆ.